ಅಜಯ್ ದೇವ್ ಗನ್ (ಹಿಂದಿ:अजय देवगन, ಉರ್ದು: اجے دیوگن, ಪಂಜಾಬಿ: ਅਜੈ ਦੇਵਗਨ), ಜನ್ಮ ನಾಮ ವಿಶಾಲ್ ವೀರೂ ದೇವ್ ಗನ್ (ಹಿಂದಿ:विशाल वीरू देवगन, ಉರ್ದು: وشال ویرو دیوگن, ಪಂಜಾಬಿ: ਵਿਸ਼ਾਲ ਵੀਰੂ ਦੇਵਗਨ), ೨ ಏಪ್ರಿಲ್ ಎರಡನೆಯ ದಿನಾಂಕ ೧೯೬೯ ರಲ್ಲಿ ನವದೆಹಲಿ, ಭಾರತ), ದಲ್ಲಿ ಜನಿಸಿದರು. ಅಜಯ್ ದೇವ್ ಗನ್ ಎಂದೇ ಹಿಂದೆ ಖ್ಯಾತರಾದ ಇವರು ಭಾರತದ ಒಬ್ಬ ಪ್ರಮುಖ ಚಿತ್ರನಟ, ನಿರ್ದೇಶಕ, ಹಾಗೂ ನಿರ್ಮಾಪಕರಾಗಿದ್ದಾರೆ. ಅವರು ಫೂಲ್ ಔರ್ ಕಾಂಟೆ ಎಂಬ ಚಿತ್ರದ ಮೂಲಕ, ೧೯೯೧ರಲ್ಲಿ, ಚಲನಚಿತ್ರಜಗತ್ತಿಗೆ ಪಾದಾರ್ಪಣೆ ಮಾಡಿದರು ಮತ್ತು ಚೊಚ್ಚಲ ಚಿತ್ರದಲ್ಲಿನ ನಟನೆಗೆ ನೀಡುವ ಫಿಲ್ಮ್ ಫೇರ್ ಶ್ರೇಷ್ಠನಟ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅಭಿನಯದ ಮೂಲಕ ತಮ್ಮದಾಗಿಸಿಕೊಂಡರು. ಅವರು ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು; ಅವುಗಳ ಪೈಕಿ ಕೆಲವೆಂದರೆ, ಜಿಗರ್ (೧೯೯೨), ದಿಲ್ ವಾಲೆ (೧೯೯೪), ಸುಹಾಗ್ (೧೯೯೪), ನಾಜಯಾಝ್ (೧೯೯೫), ದಿಲ್ ಜಲೆ (೧೯೯೬) ಮತ್ತು ಇಷ್ಕ್ (೧೯೯೭). ೧೯೯೯ರಲ್ಲಿ, ದೇವ್ ಗನ್ ಮಹೇಶ್ ಭಟ್ ರ ನಾಟಕ ಝಖ್ಮ್ ನಲ್ಲಿನ ಅಭಿನಯಕ್ಕಾಗಿ ತಮ್ಮ ಪ್ರಥಮ ರಾಷ್ಟ್ರೀಯ ಚಲನಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅದೇ ದಶಕದಲ್ಲಿ ಅವರು ನಟಿಸಿದ ಚಿತ್ರಗಳ ಪೈಕಿ ಕೆಲವೆಂದರೆ ಪ್ಯಾರ್ ತೋ ಹೋನಾ ಹೀ ಥಾ , ಹಮ್ ದಿಲ್ ದೇ ಚುಕೇ ಸನಮ್ ಮತ್ತು ಕಚ್ಚೇ ದಾಗೇ . ೨೦೦೦ದ ದಶಕದ ಆರಂಭದಲ್ಲಿ ಅವರು ನಟಿಸಿದ ಚಿತ್ರಗಳ ಪೈಕಿ ಕೆಲವೆಂದರೆ ಲಜ್ಜಾ (೨೦೦೧) ಮತ್ತು ಕಂಪನಿ (೨೦೦೨). ೨೦೦೩ರಲ್ಲಿ ಅವರು ತಮ್ಮ ಎರಡನೆಯ ಫಿಲ್ಮ್ ಫೇರ್ ರಾಷ್ಟ್ರೀಯ ಚಲನಚಿತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಭಗತ್ ಸಿಂಘ್ ರ ಪಾತ್ರದ ಅಮೋಘ ಅಭಿನಯದ ಮೂಲಕ ಪಡೆದರು. ರಾಜ್ ಕುಮಾರ್ ಸಂತೋಷಿಯವರು ನಿರ್ಮಾಪಕರಾಗಿ ತೆಗೆದ ಜೀವನಚಿತ್ರಣವಾದ ದ ಲೆಜೆಂಡ್ ಆಫ್ ಭಗತ್ ಸಿಂಘ್ ನ ಪಾತ್ರಕ್ಕೆ ಅವರಿಗೆ ಈ ಪ್ರಶಸ್ತಿ ಲಭಿಸಿತು. ಅವರ ಯಶಸ್ವೀ ಚಿತ್ರಗಳ ಪೈಕಿ ಪ್ರಮುಖವಾದುವೆಂದರೆ ರೈನ್ ಕೋಟ್ (೨೦೦೪), ಯುವಾ (೨೦೦೪) ಮತ್ತು ಓಂಕಾರ (೨೦೦೬), ಗೋಲ್ ಮಾಲ್ (೨೦೦೬), ಗೋಲ್ ಮಾಲ್ ರಿಟರ್ನ್ಸ್ (೨೦೦೮), ' : (೨೦೦೯) ೨೦೦೮ರಲ್ಲಿ ಅವರು ನಿರ್ದೇಶನಕ್ಷೇತ್ರಕ್ಕೂ ಕಾಲಿಟ್ಟು ಯೂ, ಮಿ, ಔರ್ ಹಮ್ ಚಿತ್ರವನ್ನು ನಿರ್ದೇಶಿಸಿದರು;ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಹಾಗೂ ಅವರೊಂದಿಗೆ ನಾಯಕಿಯಾಗಿ ಅವರ ಪತ್ನಿ ನಟಿ ಕಾಜೋಲ್ ಅಭಿನಯಿಸಿದರು. == ಜೀವನ ಚರಿತ್ರೆ == ದೇವ್ ಗನ್ ಮತ್ತು ಅವರ ಕುಟುಂಬದವರು ಮೂಲತಃ ಪಂಜಾಬ್ ನವರು. ಅಚರ ತಂದೆ, ವೀರೂ ದೇವ್ ಗನ್, ಒಬ್ಬ ಸ್ಟಂಟ್ ನಿರ್ದೇಶಕರು ಹಾಗೂ ಅವರ ತಾಯಿ ವೀಣಾ ದೇವ್ ಗನ್ ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ಅವರ ಸಹೋದರರಾದ ಅನೀಲ್ ದೇವ್ ಗನ್ ಒಬ್ಬ ಹಿಂದಿ ಚಿತ್ರ ನಿರ್ದೇಶಕರಾಗಿದ್ದಾರೆ. ಅವರು ಜುಹುವಿನಲ್ಲಿರುವ ಬಾಪು ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದರು ಮತ್ತು ಮಿಥಾಬಾಯ್ ಕಾಲೇಜಿನಲ್ಲಿ ಪದವಿ ಪೂರೈಸಿದರು. ಫೆಬ್ರವರಿ ೨೩, ೧೯೯೯ರಂದು ಅವರು ಚಲನಚಿತ್ರ ತಾರೆ ಕಾಜಲ್ ರನ್ನು ವಿವಾಹವಾದರು. ಪತ್ರಿಕೆಯೊಂದು ಅವರು ಮದುವೆಯು ವಾಯುವ್ಯ ಬಾಂಬೆಯಲ್ಲಿರುವ ಅಂಧೇರಿಯಲ್ಲಿನ ಗುರುದ್ವಾರದಲ್ಲಿ ನಡೆಯಲಿದೆ ಎಂದು ಬಹಿರಂಗಬಡಿಸಿಬಿಟ್ಟ ಪರಿಣಾಮವಾಗಿ ಅವರು ತಮ್ಮ ಮದುವೆಯನ್ನು ತಮ್ಮ ಮನೆಯಾದ ದೇವ್ ಗನ್ ನಿವಾಸ್ ಗೆ ಬದಲಾಯಿಸಬೇಕಾಯಿತು.ಟೆಂಪ್ಲೇಟು: ಈ ದಂಪತಿಗಳಿಗೆ ಎರಡು ಮಕ್ಕಳು; ಮಗಳು ನ್ಯಾಸಾ ೨೦೦೩ರ ಏಪ್ರಿಲ್ ನಲ್ಲಿ ಜನಿಸಿದರೆ ಮಗ ಯುಗ್ ೨೦೧೦ರ ಸೆಪ್ಟೆಂಬರ್ ನಲ್ಲಿ ಜನಿಸಿದನು. ೨೦೦೯ರ ಆಗಸ್ಟ್ ನಲ್ಲಿ ದೇವ್ ಗನ್ ತಮ್ಮ ಹೆಸರಿನ ಅಂತ್ಯಭಾಗವಾದ ಗನ್ ನಲ್ಲಿನ ಇಂಗ್ಲಿಷ್ ಅಕ್ಷರ ಎ ಅನ್ನು ತೆಗೆದುಹಾಕಿದರು. ಚಿತ್ರಗಳ ಶೂಟಿಂಗ್ ಗೆ, ಚಿತ್ರಪ್ರಚಾರಸಂಬಂಧಿತ ಕಾರ್ಯಗಳಿಗೆ ಮತ್ತು ವೈಯಕ್ತಿಕ ಪ್ರವಾಸಿಗಳಿಗೆಂದು ಒಂದು ಖಾಸಗಿ ವಿಮಾನವನ್ನು ಹೊಂದಿದ ಮೊದಲ ಬಾಲಿವುಡ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. == ವೃತ್ತಿಜೀವನ == ಅಜಯ್ ದೇವ್ ಗನ್ ಫೂಲ್ ಔರ್ ಕಾಂಟೆ (೧೯೯೧)ಚಿತ್ರದ ಮೂಲಕ ಬಾಲಿವುಡ್ ಜಗತ್ತಿಗೆ ಪಾದಾರ್ಪಣೆ ಮಾಡಿದರು ಹಾಗೂ ಆ ಚಿತ್ರವು ೯,೫೦,೦೦,೦೦೦ ರೂಗಳನ್ನು ಗಳಿಸಿದ್ದಲ್ಲದೆ ಅವರಿಗೆ ಫಿಲ್ಮ್ ಫೇರ್ ಶ್ರೇಷ್ಠ ಚೊಚ್ಚಲ ಅಭಿನಯ ಪ್ರಶಸ್ತಿಯನ್ನೂ ತಂದುಕೊಟ್ಟಿತು. ೧೯೯೨ರಲ್ಲಿ ಅವರು ಜಿಗರ್ ಎಂಬ ಚಿತ್ರದಲ್ಲಿ ಕರಿಷ್ಮಾ ಕಪೂರ್ ರೊಡನೆ ನಟಿಸಿದರೂ ಮತ್ತು ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಂಪಾದಿಸಿದ ಹಣ ರೂ. ೭,೦೦,೦೦,೦೦೦. ೧೯೯೩ರಲ್ಲಿ ಅವರು ನಿರ್ದೇಶಕ ದೀಪಕ್ ಬಹ್ರಿ/೦}ಯವರ ನಿರ್ದೇಶನದಲ್ಲಿ ಸಾಹಸಮಯ ಚಿತ್ರ ಯವರ ನಿರ್ದೇಶನದಲ್ಲಿ ಸಾಹಸಮಯ ಚಿತ್ರ {೧)ಏಕ್ ಹೀ ರಾಸ್ತಾ{/1}ದಲ್ಲಿ ನಟಿಸಿದರು ಮತ್ತು ದೀಪಕ್ ಪವಾರ್ ನಿರ್ದೇಶನದಲ್ಲಿ ಸಾಹಸಮಯ ಚಿತ್ರ ಪ್ಲಾಟ್ ಫಾರ್ಮ್ ನಲ್ಲಿ ಅಭಿನಯಿಸಿದರು. ೧೯೯೪ರಲ್ಲಿ ದೇವ್ ಗನ್ ಹ್ಯಾರಿ ಬವೇಜಾರವರ ದಿಲ್ ವಾಲೆ , ಮತ್ತು ಸುಹಾಗ್ ಹಾಗೂ ವಿಜಯ್ ಪಥ್" ಗಳಲ್ಲಿ ನಟಿಸಿದರು. ೧೯೯೫ರಲ್ಲಿ ಅವರು ಮಹೇಶ್ ಭಟ್ ರ "ನಾಜವಾಝ್" ನಲ್ಲಿ ಅಭಿನಯಿಸಿದ ಪಾತ್ರವು ಅವರ ಹೆಸರನ್ನು ಫೀಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ಸೂಚಿಸುವ ಮಟ್ಟದ್ದಾಗಿತ್ತು. ೧೯೯೬ರಲ್ಲಿ ಅವರು ನಟಿಸಿದ ಚಿತ್ರ "ದಿಲ್ ಜಲೆ". ೧೯೯೭ರಲ್ಲಿ ದೇವ್ ಗನ್ ಇಷ್ಕ್ ನಂತಹ ಹಾಸ್ಯಪ್ರಧಾನ ಚಿತ್ರಗಳಲ್ಲಿ ಅಭಿನಯಿಸಲು ಆರಂಭಿಸಿದರು. ೧೯೯೮ರಲ್ಲಿ ಅವರು "ಮೇಜರ್ ಸಾಬ್" ಚಿತ್ರದಲ್ಲಿ ಮಿಂಚಿದರು. ಅದೇ ವರ್ಷ ಻ವರು ಪ್ಯಾರ್ ತೋ ಹೋನಾ ಹೀ ಥಾ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರು. ನಂತರ ಅವರು ಮಹೇಶ್ ಭಟ್ ರ ಝಖ್ಮ್ ನಲ್ಲಿ ಅಭಿನಯಿಸಿದರು. ಅವರು ತಮ್ಮ ನಟನಾಕೌಶಲದಿಂದ ಹಲವಾರು ಪ್ರಶಸ್ತಿಗಳನ್ನು ಗೆದ್ದರು; ಅದರಲ್ಲಿ ರಾಷ್ಟ್ರೀಯ ಚಲನಚಿತ್ರದ ಶ್ರೇಷ್ಠ ನಟ ಪ್ರಶಸ್ತಿ ಮತ್ತು ಶ್ರೇಷ್ಠ ನಟನೆಗೆ ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳೂ ಸೇರಿವೆ ದೇವ್ ಗನ್ ೧೯೯೯ರಲ್ಲಿ ನಟಿಸಿದ ಚಿತ್ರಗಳ ಪೈಕಿ ಸಂಜಯ್ ಲೀಆ ಬನ್ಸಾಲಿಯವರ ಚಿತ್ರ ಹಮ್ ದಿಲ್ ದೇ ಚುಕೇ ಸನಮ್ ಹಾಗೂ "ಹಿಂದುಸ್ತಾನ್ ಕೀ ಕಸಮ್" ಮತ್ತು "ಕಚ್ಚೇ ಧಾಗೆ"ಗಳು ಸೇರಿವೆ. ೨೦೦೦ದಲ್ಲಿ ಅವರು ಹ್ಯಾರಿ ಬವೇಜಾರ "ದೀವಾನೇ"ಯಲ್ಲಿ ಅಭಿನಯಿಸಿದರು. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡರು - ಒಬ್ಬ ಕಳ್ಳ ಮತ್ತು ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರಗಳು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು. ಅದೇ ವರ್ಷ ಅವರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯೇ ತಯಾರಿಸಿದ "ರಾಜು ಚಾಚಾ" ಚಿತ್ರದಲ್ಲಿ ತನ್ನ ಪತ್ನಿ ಕಾಜೋಲ್ ರೊಡನೆ ಅಭಿನಯಿಸಿದರು. ನಿರ್ಮಾಣದ ದುಬಾರಿ ವೆಚ್ಚದ ಕಾರಣಗಳಿಂದ ಈ ಚಿತ್ರವೂ ನಿರ್ಮಾಪಕರ ಕೈ ಕಚ್ಚಿತು. ೨೦೦೧ರಲ್ಲಿ ಅವರು "ಯೇ ರಾಸ್ತೇ ಹೈ ಪ್ಯಾರ್ ಕೇ" ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಝಿಂಟಾರೊಡನೆ ಅಭಿನಯಿಸಿದರು.ಈ ಚಿತ್ರವೂ ಸಹ ಗಳಿಕೆಯಲ್ಲಿ ಸುಮಾರು ಎನ್ನಿಸಿತಷ್ಟೆ. ಅವರ ನಂತರದ ಚಿತ್ರ"ಲಜ್ಜಾ" ದಲ್ಲಿ ಮನೀಷಾ ಕೊಯಿರಾಲಾ, ಮಾಧುರಿ ದೀಕ್ಷಿತ್, ಜಾಕಿ ಷ್ರಾಫ್ ಮತ್ತು ಅನಿಲ್ ಕಪೂರ್ ಇದ್ದರು;ಈ ಚಿತ್ರದಲ್ಲಿನ ಅವರ ಅಭಿನಯ ಅವರಿಗೆ "ಫಿಲ್ಮ್ ಫೇರ್ ಶ್ರೇಷ್ಠ ಪೋಷಕ ನಟ ಪ್ರಶಸ್ತಿ"ಯನ್ನು ತಂದುಕೊಟ್ಟಿತು. ಆದರೆ ಗಳಿಕೆಯಲ್ಲಿ ಈ ಚಿತ್ರವೂ ಎಣಿಸಿದಷ್ಟು ಫಲಕಾರಿಯಾಗಲಿಲ್ಲ. ನಂತರ ಅವರು ಮಹೇಶ್ ಮಂಜ್ರೇಕರ್ ರ "ತೇರಾ ಮೇರಾ ಸಾಥ್ ರಹೇ"ಯಲ್ಲಿ ಅಭಿನಯಿಸಿದರು. ೨೦೦೨ರಲ್ಲಿ ಅವರು ರಾಂ ಗೋಪಾಲ್ ವರ್ಮ ರಮುಂಬಯಿ ಭೂಗತ ಜಗ "ದ ಕಾಲ್ಪನಿಕ ಚಿತ್ರಣವಾದಕಂಪನಿ"(ಚಿತ್ರ)ದಲ್ಲಿ ಕಾಣಿಸಿಕೊಂಡರು. ಆ ಚಿತ್ರದಲ್ಲಿನ ಅವರ "ಮಲ್ಲಿಕ್" ಪಾತ್ರಕ್ಕೆ ಅವರ ಹೆಸರು "ಫಿಲ್ಮ್ ಫೇರ್ ಶ್ರೇಷ್ಠ ನಟ ಪ್ರಶಸ್ತಿ"ಗೆ ಸೂಚಿತವಾಯಿತು ಹಾಗೂ ಅವರು "ಫಿಲ್ಮ್ ಫೇರ್ ನ ಶ್ರೇಷ್ಠ ಅಭಿನಯಕ್ಕಾಗಿ ನೀಡುವ ಪ್ರಶಸ್ತಿ"ಯನ್ನು ಪಡೆದರು. ಇದು ಗಳಿಕೆಯಲ್ಲೂ ಜಯ ಸಾಧಿಸಿತು. ಮುಂದಿನ ಚಿತ್ರ "ಹಮ್ ಕಿಸೀ ಸೇ ಕಮ್ ನಹೀ"ಯಲ್ಲಿ ಅವರು ಅಮಿತಾಭ್ ಬಚ್ಚನ್, ಸಂಜಯ್ ದತ್ ಮತ್ತು ಐಶ್ವರ್ಯ ರೈಯೊಡನೆ ಅಭಿನಯಿಸಿದರು. ಅದೇ ವರ್ಷ ಅವರು ರಾಜ್ ಕುಮಾರ್ ಸಂತೋಷಿನಿರ್ಮಿಸಿದ ವ್ಯಕ್ತಿಯ ಕಥೆ ಹೊಂದಿದ ಚಿತ್ರ "ದ ಲೆಜೆಂಡ್ ಆಫ್ ಭಗತ್ ಸಿಂಘ್"ನಲ್ಲಿ ಅಭಿನಯಿಸಿದರು. ಇದೂ ಗಳಿಕೆಯಲ್ಲಿ ಸೋತಿತು,. ಆದರೆ ಅವರು "ಫಿಲ್ಮ್ ಫೇರ್ ವಿಮರ್ಶಕರ ಶ್ರೇಷ್ಠ ಅಭಿನಯ ಪ್ರಶಸ್ತಿ" ಹಾಗೂ ತಮ್ಮ ಜೀವನದ ಎರಡನೆಯ "ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಸ್ರೇಷ್ಠ ನಟ" ಪ್ರಶಸ್ತಿಗಳನ್ನು ತಮ್ಮ ನಟನಾಕೌಶಲ್ಯದಿಂದ ಗೆದ್ದುಕೊಂಡರು. ಅವರು ನಂತರ ಅನೀಝ್ ಬಾಝ್ಮೀಯವರ "ದೀವಾನ್ಗೀ"ಯಲ್ಲಿ ಅಭಿನಯಿಸಿದರು;ಈ ಚಿತ್ರವು ಭಾಗಶಃ ವಿಲಿಯಂ ಡೀಹ್ಲ್ ರ ಆಂಗ್ಲಭಾಷಾ ಕಾದಂಬರಿ "ಪ್ರೈಮಲ್ ಫಿಯರ್"ನಿಂದ ಪ್ರೇರಿತವಾಗಿತ್ತು. ಅವರು ತಮ್ಮ ನಕಾರಾತ್ಮಕ ಪಾತ್ರಗಳಿಗೂ ಹಲವಾರು ಪ್ರಶಸ್ತಿಗಳನ್ನು ಪಡೆದರು; ಅವುಗಳ ಪೈಕಿ "ಪಿಲ್ಮ್ ಫೇರ್ ಸ್ರೇಷ್ಠ ಖಳನಾಯಕ ಪ್ರಶಸ್ತಿ", "ಸ್ಟಾರ್ ಸ್ಕ್ರೀನ್ ಶ್ರೇಷ್ಠ ಖಳನಾಯಕ ಪ್ರಶಸ್ತಿ" ಮತ್ತು "ನಕಾರಾತ್ಮಕ ಪಾತ್ರಗಳಲ್ಲಿ ಶ್ರೇಷ್ಠ ಅಭಿನಯಕ್ಕಾಗಿ ಝೀ ಸಿನೇ ಪ್ರಶಸ್ತಿ"ಗಳೂ ಸೇರಿವೆ. ಇದರ ಗಳಿಕೆಯೂ ತಕ್ಕ ಮಟ್ಟದ್ದಾಗಿತ್ತಷ್ಟೆ. ೨೦೦೩ರಲ್ಲಿ ಅವರುರಾಮ್ ಗೋಪಾಲ್ ವರ್ಮರ "ಭೂತ್" ನಲ್ಲಿ ಊರ್ಮಿಳಾ ಮತೋಂದ್ಕರ್ ರೊಡನೆ ನಟಿಸಿದರು, ಈ ಚಿತ್ರವು ವಿಮರ್ಶಕರ ಮೆಚ್ಚಿಗೆ ಪಡೆಯಿತು. ಗಲ್ಲಾಪೆಟ್ಟಿಗೆಯಲ್ಲೂ ಇದು ಗೆದ್ದುಕೊಂಡಿತು. ಅವರು ನಂತರ ಸಾಹಸಮಯ ಕೌತುಕಭರಿತ ಚಿತ್ರ ": " ದಲ್ಲಿ ತಮ್ಮ ಚೊಚ್ಚಲ ಚಿತ್ತದಲ್ಲಿ ಅಭಿನಯಿಸುತ್ತಿದ್ದ ನೆಹಾ ಧುಪಯಾರೊಡನೆ ನಟಿಸಿದರು, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶ ಗಳಿಸಿತು, ಇದಕ್ಕೆ ಕಾರಣ ಶ್ರೇಷ್ಠ ತಾಂತ್ರಿಕ ಉಪಕರಣಗಳು ಹಾಗೂ ಚೆನ್ನಾಗಿ ಚಿತ್ರಿಸಿದ ಸಾಹಸ ದೃಶ್ಯಗಳು. ಅವರು ನಂತರ ಮಿಲನ್ ಲೂಥ್ರಿಯಾರ ಪ್ರಣಯಭರಿತ ಚಿತ್ರ "ೋರಿ ಚೋರಿ"ಯಲ್ಲಿ (೨}ರಾಣಿ ಮುಖರ್ಜಿ ಮತ್ತು ಸೋನಾಲಿ ಬೇಂದ್ರೆಯೊಡನೆ ನಟಿಸಿದರು, ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಸೋತಿತು. ಅದೇ ವರ್ಷ ಅವರು ಪ್ರಕಾಶ್ ಝಾರ ಚಿತ್ರ "ಗಂಗಾಜಲ್"ನಲ್ಲಿ ಕಾಣಿಸಿಕೊಂಡರು ಮತ್ತು ಅವರ ಹೆಸರನ್ನು "ಫಿಲ್ಮ್ ಫೇರ್ ಶ್ರೇಷ್ಠ ನಟ ಪ್ರಶಸ್ತಿ"ಗಾಗಿ ಸೂಚಿಸಲಾಯಿತು. ಅವರು ಮುಂದಿನ ಚಿತ್ರ ರೋಹಿತ್ ಶೆಟ್ಟಿಯವರ ಚೊಚ್ಚಲ ನಿರ್ದೇಶನದ "ಜಮೀನ್" , ೧೬,೦೦,೦೦,೦೦೦ ಗಳಿಸಿತು. ನಂತರ ಅವರು ಜೆ.ಪಿ.ದತ್ತರ ಸಮರ ಚಿತ್ರ " ಕಾರ್ಗಿಲ್"ನಲ್ಲಿ ಅಭಿನಯಿಸಿದರು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ಇತರ ಪ್ರಶಸ್ತಿಗಳು ಹಾಗೂ ನಾಮನಿರ್ದೇಶನಗಳ ಪೈಕಿ ದೇವ್ ಗನ್ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಮೂರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. == ಚಲನಚಿತ್ರಗಳ ಪಟ್ಟಿ == === ನಟ === === ನಿರ್ಮಾಪಕ === === ನಿರ್ದೇಶಕಿ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ದೇವ್ ಗನ್ ಅಜಯ್ ದೇವ್ ಗನ್ ರ ಅಧಿಕೃತ ಜಾಲತಾಣ.